ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ
ಕಳೆದ ತಿಂಗಳು "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಚಿಂತನಾ ಕೂಟದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಇದು ಸಂವಾದ . ಕಾಂ ಹಾಗೂ ಕನ್ನಡಸಾಹಿತ್ಯ. ಕಾಂ ಜೊತೆಗೂಡಿ ಗಿರೀಶ್ ಕಾಸರವಳ್ಳಿ ಅವರ ಗೌರವಾರ್ಥ ಆಯೋಜಿಸಿದ ಸಿನೆಮಾ ರಸಗ್ರಹಣ ಶಿಬಿರ. ಕಾರ್ಯಕ್ರಮದ ಕೇಂದ್ರಬಿಂದು - ಶ್ರೀ ಗಿರೀಶ್ ಕಾಸರವಳ್ಳಿ ಈ ಪತ್ರ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಕಾರ್ಯಕ್ರಮದ ಅನುಭವವಲ್ಲ. ಅದರಿಂದ ಪ್ರೇರಿತ. A cinema can Impress, Influence, and/or Inspire (i3) us. ಯಾವ ಚಿತ್ರ i3 ಆಗಬಲ್ಲದು ಎಂಬುದು ಹೇಳುವುದು ಸಾಧ್ಯವಿಲ್ಲ. ಅದು commercial film ಅಥ್ವಾ ಅಪರೂಪಕ್ಕೆ ಕಲಾತ್ಮಕ ಚಿತ್ರ ಯಾವುದಾದರೂ ಆಗಬಹುದು. ಇಲ್ಲಿ "ಅಪರೂಪ" ಎಂದು ಬರೆದದ್ದಕ್ಕೆ ಕಾರಣವಿದೆ. ಕಲಾತ್ಮಕ ಸಿನಿಮಾ ಸಾಮಾನ್ಯರ ಆಯ್ಕೆ ಅಲ್ಲ. ಅದೇನಿದ್ರು serious film critique's choice. ಸಾಮಾನ್ಯವಾಗಿ ಇಂತಹ ಚಿತ್ರಗಳ ಹೂರಣ ಸಮಾಜದ ಹುಳುಕು ಮತ್ತು ಉತ್ತಮ ಜಗತ್ತಿನ ಕನಸು. ವ್ಯಂಗ್ಯ ಅಂದ್ರೆ ಯಾರ ನೋವು ನಲಿವನ್ನ ಈ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿರತ್ತೋ ಅವರೇ ಅದನ್ನ ನೋಡೋಲ್ಲ. ಇಲ್ಲಿ ಬದಲಾಗಬೇಕಿರುವುದು ಯಾವುದು? ಸಿನೆಮಾ ಮಾಡುವ ರೀತಿಯೋ ಅಥವಾ ನೋಡುಗರೋ? ಚಲನಚಿತ್ರಗಳನ್ನ ಮನರಂಜನೆಗೆ ನೋಡುವವರ ಸಂಖ್ಯೆ ಹೆಚ್ಚು. ನೀವು ಯಾವಾಗಲಾದರು "ನಾನು frame by frame ಅರ್ಥ ಮಾಡ್ಕೊತೀನಿ" ಅಂತ ಥಿಯೇಟರಿಗೆ ಹೋ...