ಜ್ಞಾಪಕ ಚಿತ್ರಶಾಲೆ
ಮೆರವಣಿಗೆಯಲ್ಲಿ ಆಗಮಿಸಿದ ಕವಿಗಳು
-------------------------------------------------------------------------------------------------
"ಮತ್ತದೇ ಸಂಜೆ ಅದೇ ಬೇಸರ" ಎನ್ನುವಂತಿರಲಿಲ್ಲ ಈ ಭಾನುವಾರ ಸಂಜೆ. ಕನ್ನಡ ಕಾವ್ಯದ ರಸಧಾರೆ ಹರಿದಿತ್ತು ಕಲಾಮಂದಿರದಲ್ಲಿ. ಸಾಹಿತ್ಯಲೋಕದ 'ಅಂದು - ಇಂದು' ಗಳ ಮೇಳವಣೆ. ತಮ್ಮ ಹಾಗೂ ಕವಿಗಳ ನಂಟಿನ ಗಂಟನ್ನ ಬಿಚ್ಚಿ 'ಜ್ಞಾಪಕ ಚಿತ್ರಶಾಲೆ' (ಡಿ. ವಿ. ಜಿ ಅವರ ಕೃತಿಯೊಂದರ ಹೆಸರು) ಸೃಷ್ಟಿಸಿದವರು ರವಿಬೆಳೆಗೆರೆ. ಭಾವಗೀತೆಗಳಿಗೆ ಜೀವ ತುಂಬಿದವರು ಎಸ್. ಪಿ. ಬಿ, ಸಂಗೀತ ಕುಲಕರ್ಣಿ ಮತ್ತು ಇತರರು.
ಬರಿಯ ಗೀತೆಗಳಲ್ಲ ಅವು. ಮುಂಜಾವಿನ ತುಂತುರು ಸೋನೆ ಮಳೆ, ಕೃಷ್ಣನ ಕೊಳಲ ದನಿ, ಎದೆತುಂಬಿ ಬಂದ ಹಾಡು, ಅಥವಾ ಶಿವನ ಮುಡಿಯಿಂದ ಇಳಿದ ಗಂಗೆ...... ಒಟ್ಟಿನಲ್ಲಿ ಅವೆಲ್ಲ ಉಪಮೆ ನಿಲುಕದ ಬರವಣಿಗೆ. ಅದರರ್ಥ, ಆಂತರ್ಯ ಬರೆಯಲು ನಾನು ಅಲ್ಪ.
ಕೆ. ಎಸ್. ನಿಸಾರ್ ಅಹಮದ್
-------------------------------------------------------------------------------------------------
'ಮೈಸೂರು ಮಲ್ಲಿಗೆ'ಯಲ್ಲಿ ಪ್ರೀತಿ, 'ಮಂಕುತಿಮ್ಮನ ಕಗ್ಗ'ದಲ್ಲಿ ಜೀವನಸಾರ, 'ನಿತ್ಯೋತ್ಸವ'ದಲ್ಲಿ ನಮ್ಮ ನೆಲದ ಹಿರಿಮೆ ಗರಿಮೆ ..... ಹೀಗೆ ತಮ್ಮ ಅದ್ವಿತೀಯ ಸೃಜನಶೀಲತೆಯಿಂದ ನಮ್ಮ ಸಂಸ್ಕೃತಿಯನ್ನ ಉಳಿಸಿ ಬೆಳೆಸಲು ಶ್ರಮಿಸಿದ ಸಾಹಿತಿಗಳಿಗೊಂದು ನಮನ ಈ ಕಾರ್ಯಕ್ರಮ. 'ಈ' ಟಿವಿಯಲ್ಲಿ 'ಕವಿ ನಮನ' ಕಾರ್ಯಕ್ರಮ ಪ್ರಾಸಾರವಾಗುವುದು. ಕತ್ತರಿ ಪ್ರಯೋಗವಿರುತ್ತದೆಯಾದ್ದರಿಂದ ರವಿ ಬೆಳೆಗೆರೆಯವರ ಎಲ್ಲಾ ಮಾತಿನ ಬಾಣಗಳು ಸಿಗದಿರಬಹುದು ಆದರೆ ನೋಡಲೇ ಬೇಕಾದ ಕಾರ್ಯಕ್ರಮ.
'ಕವಿ ನಮನ' ಕ್ಕೆ ಸಜ್ಜುಗೊಳ್ಳುತ್ತಿರುವ ಕಲಾಮಂದಿರದ ವೇದಿಕೆ-------------------------------------------------------------------------------------------------
ಪ್ರಸ್ತುತವಾದ ಭಾವಗೀತೆಗಳು
ಓಂ ಸಚ್ಚಿದಾನಂದ - ಕು. ವೆಂ. ಪು.
ಕೊಳಲನೂದು ಗೋವಿಂದ - ಪು. ತಿ. ನ.
ಬದುಕು ಜಟಕಾ ಬಂಡಿ - ಡಿ. ವಿ. ಜಿ.
ಒಂದು ಮುಂಜಾವಿನಲಿ - ಚನ್ನವೀರ ಕಣವಿ.
ಎದೆತುಂಬಿ ಹಾಡಿದೆನು - ಜಿ. ಎಸ್. ಎಸ್.
ಕುರಿಗಳು ಸಾರ್ ಕುರಿಗಳು - ಕೆ. ಎಸ್. ನಿಸಾರ್ ಅಹಮದ್.
ಮರೆತೇನೆಂದರೆ ಮರೆಯಲಿ - ಚಂದ್ರಶೇಖರ ಕಂಬಾರ.
ಹಿಂದೆ ಹೇಗೆ ಚಿಮ್ಮುತಿತ್ತು - ಲಕ್ಷ್ಮಿ ನಾರಾಯಣ ಭಟ್ಟ.
ನನ್ನ ಹಳೆಯ ಹಾಡುಗಳೇ- ವೆಂಕಟೇಶ್ ಮೂರ್ತಿ.
ನಿನ್ನ ಕಂಗಳ ಕೊಳದೇ - ಎಂ. ಏನ್ ವ್ಯಾಸರಾಯ.
ಇನ್ನೂ ಕೆಲವು ಭಾವಗೀತೆಗಳನ್ನ ಕೇಳ್ತಾ ರಾತ್ರಿ ಆದದ್ದೇ ತಿಳಿಯಲಿಲ್ಲ. ಬಾಲಸುಬ್ರಮಣ್ಯಂ ಅವರ ಸಿರಿಕಂಠದಲ್ಲಿ ದ. ರಾ. ಬೇಂದ್ರೆಯವರ "ಇಳಿದು ಬಾ ತಾಯೆ" ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಇಂಥದ್ದೊಂದು ಕಾರ್ಯಕ್ರಮವನ್ನ ಮತ್ತೊಮ್ಮೆ miss ಮಾಡಿಕೊಂಡಿದ್ದಕ್ಕೆ ಬೇಸರವಾಗ್ತಿದೆ.
ReplyDeleteಬರಹ ಚೆನ್ನಾಗಿದೆ.ತುಂಬಾ ಸಂಕ್ಷಿಪ್ತವಾಯ್ತೇನೊ ಅನ್ನಿಸ್ತಿದೆ. ಇನ್ನೊಂದೆರಡು ಛಾಯಾಚಿತ್ರಗಳ ಜೊತೆ ವಿವರಿಸಿದ್ದರೆ ಚೆನ್ನಾಗಿರ್ತಿತ್ತು ಅಲ್ವಾ.
Pramod,
ReplyDeletesankshiptavaagide annodu nija. adre idanna karyakrama mugida dinave baredu mugisuva gaDuva ittukondidde. Addarinda hecchu bareyalu saadhyvaagalilla. idi blog idondu vishayakke misaliduvashtide baredare. innashtu chaayaachitragalanna serisi patrisuttene.
ಅಯ್ಯೊ...ಮತ್ತೆ ಮಿಸ್ಸ್ ಮಾಡ್ಕೊತಾ ಇದೀನಿ ನಮ್ಮ ಮೈಸೂರ ದಸರ!
ReplyDeleteವ್ಯಾಸರಾಯರ 'ನಿನ್ನ ಕಂಗಳ ಕೊಳದಿ' ಕೇಳಬೇಕು ಅನ್ನಿಸುತ್ತಾ ಇದೆ.
ಕಲಾಮಂದಿರದಲ್ಲಿ ಕುಳಿತು ನಾಟಕ ನೋಡಬೇಕು ಅನ್ನಿಸುತ್ತಾ ಇದೆ.
ಆ ಗದ್ದಲದಲ್ಲಿ ಜನರ ಜೊತೆ ಮೆರವಣಿಗೆ ನೋಡಬೇಕು ಅನ್ನಿಸುತ್ತಾ ಇದೆ.
ತೋರಿಸುವೆಯಾ?