Posts

Showing posts from November, 2010

ಮನಸೇ....

ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ , ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ .... I don't remember how many times I might have listened to this song from Amrutavarshini. ಈಗಲೂ ಕೇಳ್ತೇನೆ ಬೇಸರವಿಲ್ಲದೇ . ಸದ್ದಿಲ್ಲದೊಂದು ರಾತ್ರಿಯಲ್ಲಿ ನಿದಿರೆ ರಜಾ ಹಾಕಿ ಕುತಾಗ, ಈ ಹಾಡಲ್ಲೇನೋ  ಆತ್ಮಿಯ ಸ್ಪಂದನ. ರಾತ್ರಿ ಒಂದೂವರೆಯಲ್ಲಿ ಮೋಡ ಮುಸುಕಿ ಸಣ್ಣ ಹನಿ ಇಡುವಾಗ ಕತ್ತಲ ಹಂದರದ ಅಡಿಯಲ್ಲಿ ಆಲೋಚನೆಗಳ ತೇಲಿಸುವ ಹಾಡಿನ ಮೇಳವಣೆ. ಆಗೆಲ್ಲ ಕೇಳುವ ಸದ್ದಿನಲ್ಲೇನೋ ಹೊಸ ಸ್ಪರ್ಶ. ನವಿಲುಗರಿಯು ನೇವರಿಸಿದಂತೆ. ಅದಕಾಗೆ ಈ ಹಾಡನ್ನ ಮತ್ತೆ ಮತ್ತೆ ಆಲಿಸುವ ಹಂಬಲ. ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ?....... ಈ ಭಾವ ಕುಸುರಿ ಮನಸಿನದು. ನಾವೇನಿದ್ದರೂ ಅದರಂತೆ ತಾಳ ಹಾಕುವುದು.ಮನಸ್ಸಿಗೆ ಹಿಡಿಸದ ರಾಗವೆಷ್ಟು ಕಷ್ಟವೋ ಹಿಡಿಸಿದ್ದು ಅಷ್ಟೇ ಸುಲಭ . ಗುರಿಯಿಲ್ಲದೆ ಓಡುವ ಕುದುರೆ  ಕಟ್ಟಿದಂತೆ ಮನಸಿನ ಭಾವಗಳ ಕಟ್ಟುವುದು ಅಂದರೆ.ಆದರೆ ಅದು ಹಾಗೆ ಓಡುವಾಗಲು ಚಂದ ಅಲ್ಲವೇ ? ಯಾವಾಗಲೂ  ಚಿಂತನೆಗೊಂದು ಗುರಿ ಯಾಕೆ ಬೇಕು?ಯಾವಾಗಲೊಮ್ಮೆ ಸರಿ ರಾತ್ರಿ ತನ್ನೊಂದಿಗೆ  ಅದು ತಾನೇ ಇರಬೇಕು. ತನಗೆ  ಬೇಕಾದನ್ನ ಅರಸಿ ಹೋಗುವ ಹೊತ್ತು .ಆ ಹೊತ್ತಿಗಾಗೆ ಆಗಾಗೆ  ಕತ್ತಲ ಕೊನೆಯಲ್ಲಿ  ದಿಗಂತದತ್ತ  ನೋಟ  ನೆಟ್ಟು ಕಛೇರಿ  ಒಂದು ಇಟ್ಕೊಬೇಕು. ಮನಸಿನದು ಶ್ರುತಿ ಇಲ್ಲದ ಹಾಡಾದರೂ ಸರಿ ಆಲಿಸಬೇಕು. ಯಾರಿಗೆ ಗೊತ್