ನಾಡ ಹಬ್ಬ ನೋಡು ಬಾ

ನನ್ನ ಬ್ಲಾಗ್ ಗೆ ಯಾವಾಗ್ಲೂ ಬರೋರಿಗೆ , ಅಪರೂಪಕ್ಕೆ ಬಂದವರಿಗೆ ಹಾಗೂ ದಾರಿ ತಪ್ಪಿ ಬಂದವರಿಗೆ ( ಬಾರದಿರುವವರನ್ನು ಸೇರಿಸಿ) ದಸರಾ ಹಬ್ಬಕ್ಕೆ ಆತ್ಮೀಯ ಸ್ವಾಗತ.

ಅರಮನೆ ಮುಂಭಾಗದಲ್ಲಿಯ ಸ್ವಾಗತ ಚಿತ್ರ

ದಿನದ ಕೆಲಸ ಮುಗಿಸಿ ಅರಮನೆ ಕಡೆ ಹೊರಟಾಗ ಸಂಜೆ ೭. ಮನಸ್ಸಿನ್ನಲ್ಲೊಂದು ಪುಳಕ. ದೀಪದ ಅಲಂಕಾರದಿಂದ ಕಂಗೊಳಿಸೋ ರಸ್ತೆಗಳು, ಅರಮನೆ ಎಲ್ಲವೂ ಒಂದು ರೋಮಾಂಚನ. ಅರಮನೆ ಮುಟ್ಟಿದಾಗ ಪ್ರಿಯಾ ಸಹೋದರಿಯರ ಗಾಯನ ಪ್ರಾರಂಭವಾಗಿತ್ತು. ಒಂದೆರಡು ಕಿರ್ತನೆಗಳನ್ನ ಕಿವಿಯಲ್ಲಿ ತುಂಬಿಕೊಂಡು ವಿಜಯ ದಶಮಿ ಮೆರವಣಿಗೆಗೆ ಅರಮನೆಗೆ ಆಗಮಿಸಿರುವ ಆನೆಗಳನ್ನ ನೋಡಿಕೊಂಡು ( I took a snap of all of them. But it din't come out well. You know why! :)) ಅಲ್ಲಿಂದ ಹೊರಟಾಗ ೮:೩೦. ಮನೆಗೆ ಹಿಂತಿರುಗುವ ದಾರಿಯಲ್ಲಿ ಸಿಗುವ ಕಲಾಮಂದಿರ ಕೈ ಬಿಸಿ ಕರೆಯಿತು.

ಅರಮನೆ ಆವರಣದಲ್ಲಿ ಪ್ರಿಯಾ ಸಹೋದರಿಯರಿಂದ ಕಛೇರಿ

ರಂಗಾಯಣಕ್ಕೆ ದಾರಿ ತೋರುವ ಮಣ್ಣಿನ ಬೊಂಬೆ

ಏನ್ ನಡೀತಿದೆ ಅನ್ನೋ ಕುತೂಹಲ ತಡೆಯಲಾರದೆ ಕಲಾಮಂದಿರ ಹಿಂದೆ ಇರುವ ರಂಗಾಯಣಕ್ಕೆ ಹೋದರೆ ಯಾವುದೋ ನಾಟಕ ನಡೆಯುತ್ತಿತ್ತು. ನಾಟಕ ಪ್ರಾರಂಭವಾಗಿ ಬಹಳ ಹೊತ್ತಾಗಿತ್ತು. ಅದರ ತೆರೆ ಇಳಿಯುವುದನ್ನ ನೋಡುವ ಅವಕಾಶ ನಮ್ಮದಾಯಿತು ( ಅರ್ಥ ಆಗ್ಲಿಲ್ಲ ಆದ್ರೆ ಚೆನ್ನಾಗಿತ್ತು ).
ಪಕ್ಕದಲ್ಲೇ 'ಬೊಂಬೆ ಮನೆ'. ರಾಮಾಯಣ, ಮಹಾಭಾರತದ ಕಥೆಗಳಷ್ಟೇ ಅಲ್ಲದೆ ಹಳ್ಳಿಯ ಆಟಗಳು, ಮೈಸೂರು ಅರಮನೆ, ಜಂಬೂ ಸವಾರಿ, ಮದ್ವೆ ... ಅಬ್ಭಾ ಅಲ್ಲಿ ಏನಿರಲಿಲ್ಲ ಕೇಳಿ ! ಅದನ್ನ ಜೋಡಿಸೋದಕ್ಕೆ ಹತ್ತು ದಿನಗಳು ಬೇಕಾಯಿತಂತೆ. 'ಬೊಂಬೆ ಮನೆ' ಯ ಕೆಲವು ಛಾಯಾಚಿತ್ರಗಳು ಇಲ್ಲಿವೆ.

ದ್ವಾರದಲ್ಲಿ ಸ್ವಾಗತಕ್ಕೆ ಚಾಮುಂಡೇಶ್ವರಿ


ಸಿಂಗಾಪುರದ ಸುಂದರಿಯರಂತೆ ಇವರು!

ನಾಳೆ 'ಯುವ ದಸರಾ'ದೊಂದಿಗೆ ಭೇಟಿ.

Visit http://mysoredasara.net/ for more information.

Comments

  1. ಆಂತು ಇಂತೂ ಇನ್ನೊಂದು ವರದಿ ಬಂತು! ಧನ್ಯವಾದಗಳು.
    Official Dasara Website is in good shape now. Check it out: http://mysoredasara.com/

    ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ