ಹಾಡು, ಇದೇ ಹೊಸ ಹಾಡು
'ಹಾಡೊಂದ ಹಾಡುವೆ ನೀ ಕೇಳು ಮಗುವೇ' .... ಯಾರ ಸಾಹಿತ್ಯವಿದು ನೆನಪಾಯ್ತ? ನಿಮಗೆ ತಿಳಿದಿದ್ರೆ ನನ್ನ ಅಭಿನಂದನೆಗಳು. ಇದು ಅರ್.ಎನ್. ಜಯಗೋಪಾಲ ಅವರು ನಮಗಾಗಿ ಬಿಟ್ಟು ಹೋಗಿರುವ ಅಮೂಲ್ಯ ಗೀತೆಗಳಲ್ಲಿ ಒಂದು. ಇಂತಹ ಹಾಡನ್ನ ಕೇಳುವುದರಷ್ಟೇ ಆನಂದ ಅದನ್ನ ಬರೆದವರ ನೆನೆಯುವುದರಲ್ಲಿದೆ. ಅವರ ಕಲಾ ಸೇವೆಗೆ ನಾವು ತೋರಬಹುದಾದ ಕೃತಜ್ಞತೆ ಅದು.
ಹಳೆಯ ಹಾಡುಗಳಲ್ಲಿ ಅದೇನು ಮೋಡಿ ಇತ್ತು! ಗೀತೆ ಪರಿಪೂರ್ಣವಾಗಲು ಬೇಕಾದ ಎಲ್ಲಾ ಪರಿಕರಗಳನ್ನ ಹೇಗೆ ಅವರು ಹೊಂದಿಸುತ್ತಿದ್ದರೋ! ಸಾಹಿತ್ಯ ಮತ್ತು ಸಂಗೀತ ಪೈಪೋಟಿ ಮಾಡಿತ್ತೇನೋ ಆಗ. ಗೀತೆಗಳ ಅರ್ಥದ ಆಳ ಅಪಾರ. ವಿಶ್ಲೇಷಿಸುವ ಆಸಕ್ತಿಯಾಗಲಿ, ಹೋಗಲಿ ಸಮಯ ಯಾರಲ್ಲಿ ಇದೆ? ಹಾಗಂತ ಸರಸ್ವತೀ ಪುತ್ರರ ಸೇವೆಯನ್ನ ಮರೆತರೆ ಭಾಷೆ, ಸಂಸ್ಕೃತಿ ಬೆಳೆಯುವುದೇ? ಅದೇನೆ ಇರಲಿ. ಸಾಧ್ಯವಾದ ಮಟ್ಟಿಗೆ ಸಾಹಿತ್ಯವನ್ನ ಮತ್ತು ಸಾಹಿತಿಗಳನ್ನ ಉಳಿಸಿ ಬೆಳೆಸಲು ನಾವು ಪ್ರಯತ್ನಿಸಬೇಕಲ್ಲವೇ? ಸಧ್ಯಕ್ಕೆ ನನ್ನದೊಂದು ಪುಟ್ಟ ಪ್ರಯತ್ನ.
ಲಭ್ಯವಾದ ಹಾಡಿನ ಸಾಹಿತ್ಯ ಪತ್ರಿಸುತ್ತಿದ್ದೇನೆ. ನಿಮ್ಮ ನೆಚ್ಚಿನ ಹಾಡು ಮತ್ತದರ ಚರ್ಚೆಗೆ ಆದರದ ಸ್ವಾಗತ.
ಹಾಡು: ಇದೇ ಹೊಸ ಹಾಡು * ಚಿತ್ರ: ನನ್ನ ತಮ್ಮ * ಹಾಡಿದವರು: ಪಿ. ಬಿ. ಎಸ್
ಸಾಹಿತ್ಯ: ಕಣಗಾಲ್ ಪ್ರಭಾಕರ್ ಶಾಸ್ತ್ರಿ * ಸಂಗೀತ: ಘಂಟಸಾಲ
ಇದೇ ಹೊಸ ಹಾಡು, ಹೃದಯ ಸಾಕ್ಷಿ ಹಾಡು
ಹೃದಯಾಷೆ ಭಾಷೆ ಈ ಹಾಡು { ಇದೇ ಹೊಸ }
ಮನದೆ ನೆನೆದ ಮಾತುಗಳೆಲ್ಲ ಮಧುವಾಗಿ ಸವಿಯುವ ಹಾಡು
ಸವಿಯಾದ ಜೀವನವೆಲ್ಲ ಹಾಯಾದ ಒಲವಿನ ಹಾಡು
ಒಲವು ಚಲವು ಒಂದಾದೆಲ್ಲ ಎಂದೂ ಯಾರು ಮರೆಯದ ಹಾಡು { ಇದೇ ಹೊಸ }
ಚಂದ್ರ ಕಾಂತಿ ಚಿಮ್ಮಿದ ಹಾಡು, ಮೈ ಮರೆಸಿ ನಗಿಸೋ ಹಾಡು
ಮುಂಬಾಳ್ವೆಯ ಮುನ್ನುಡಿ ಹಾಡು, ತಾಯಿ ದೇವಿ ಹರಸಿದ ಹಾಡು
ಜನ್ಮ ಜನ್ಮದ ಪುಣ್ಯದ ಹಾಡು, ಕನ್ನಡಾಂಬೆ ಕಲಿಸಿದ ಹಾಡು { ಇದೇ ಹೊಸ }
ಇದನ್ನ ನೋಡಿ - http://kannadalyrics.com/
ReplyDeleteಮತ್ತೆ ಇದನ್ನ - http://www.tulasivana.com/
ನೀವು ಯಾಕೆ Kannadalyrics-ಗೆ ಬರೀಬಾರದು?
ನಿಮ್ಮ ಕವಿತೆಗಳನ್ನ ಬರೀರಿ ಇಲ್ಲಿ. ಪ್ರಮೋದ್ ಬ್ಲಾಗಲ್ಲಿ ಮಾತ್ರ ಓದ್ಲಿಕ್ಕಾಗತ್ತೆ. ಇದ್ರಲ್ಲೂ ಬರೀರಿ.
ಇದೇ ರೀತಿ "ಹಾಡೊಂದ ಹಾಡುವೆ ನೀ ಕೇಳು ಮಗುವೆ" ಅರ್.ಎನ್.ಜಯಗೋಪಾಲ್ ಅವರ ಇನ್ನೊಂದು ತುಂಬ ಭಾವಪೂರ್ಣ ಹಾಡು. ಈ ಹಾಡುಗಳೆಲ್ಲ ಎಂದಿಗೂ ಹೊಸ ಹಾಡುಗಳೇ, ಎಂದೂ ಹಳೆಯದಾಗುವುದಿಲ್ಲ.
ReplyDeletebhagavatare,
ReplyDeletenaanu bardirodu onde haaDina sahityavaddarinda kannadalyricsge kaLuhisilla.tulasivana odiddene.sogasaagide.
nimma salahege dhanyavaadagalu. prati baari enu bareyabekanno yochaneyanna nivu taggistidiri.
deepasmita avare,
Jayagopalara rachanege saati unte?
avara giteyondaana 'Psycho'(song: mussanje rangalli)dalli baLasiddare. kELi. nimge hiDisabahudu.