ತೆರೆ ಇಳಿದ ಮೇಲೆ

ದಸರೆಗೆ ತೆರೆ ಇಳಿದಾಗಿದೆ. ಆದರೆ ಇನ್ನೂ ಕೆಳಗಳಿಸದ ಬ್ಯಾನರ್, ರಸ್ತೆಗೆ ತೋರಣವಾಗಿದ್ದ ಬಲ್ಬಗಳು ಸಂಭ್ರಮವನ್ನ ಮತ್ತೆ ಕಂಗಳ ಕೊಳದಲ್ಲಿ ಮೂಡಿಸುತ್ತವೆ. ಖಾಲಿಯಾಗಿರುವ ಮೈದಾನಗಳು ಕಳೆದ ವಾರ ಜನಸಾಗರದಲ್ಲಿ ಸಣ್ಣದಾಗಿ ಕಾಣುತ್ತಿದ್ದವು . ಇಂದು ಎಷ್ಟು ದೊಡ್ಡದಾಗಿವೆ ಎನಿಸುತ್ತದೆ.


ಅರಮನೆ ಆವರಣದಲ್ಲಿಯ ಅಂಜನೇಯ ಗುಡಿ ಗೋಪುರ.


ದಸರಾ ಉತ್ಸವ ಹಬ್ಬವಷ್ಟೇ ಅಲ್ಲ.ಇದು ನವರಸಗಳ ಸಮಾಗಮ.ನಾಡಿನ ಹೆಮ್ಮೆ.ನಮ್ಮ ಸಂಸ್ಕೃತಿಯ ಸುಮ ಅರಳಿ ಊರೆಲ್ಲಾ ಘಮಘಮಿಸುತ್ತದೆ. ಜನರ ಮನೋಭಾವದಲ್ಲಿಯೇ ಒಂದು ರೀತಿಯ ಒಗ್ಗಟ್ಟು. ನಮ್ಮೂರು, ನಮ್ಮ ಜನ ಅನ್ನೋ ಆತ್ಮೀಯತೆ. ಈ ಬಾರಿ ಭಯದ ನೆರಳಿದ್ದರು ಸಂಭ್ರಮ ತಗ್ಗಿರಲಿಲ್ಲ.ಕಳೆದ ಮೂರು ವರ್ಷದಲ್ಲಿ ನಾನು ಕಂಡ ಸುಸಜ್ಜಿತ ದಸರಾ ಇದು.ಇದರ ಶ್ರೇಯ ಮೈಸೂರಿನ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೂ ಸಲ್ಲುತ್ತದೆ. ರಸ್ತೆಗಳ ಕಾಮಗಾರಿ ಪೂರ್ಣ ಆಗಿರಲ್ಲಿಲ್ಲ. ಅವುಗಳ ಸ್ವಚ್ಛತಾ ಕೆಲಸ ಚೆನ್ನಾಗಿ ನಡೆಯಿತು. ಅಚ್ಚುಕಟ್ಟಾದ ಸುರಕ್ಷತಾ ವ್ಯವಸ್ಥೆ ನನ್ನ ಛಾಯಚಿತ್ರಗಳಲ್ಲೂ ಅಲ್ಲಲ್ಲಿ ನೋಡಬಹುದು (Police everywhere ;). Specially Jamboo savari looked like a procession of police. ನೆನಪುಗಳನ್ನ ಸಾಧ್ಯವಾದ ಮಟ್ಟಿಗೆ ಪೋಣಿಸಿದ್ದೇನೆ. ಇದು ದೊಡ್ಡ ಯಾತ್ರೆಯ ಸಣ್ಣ ಝಲಕ್ ಅಷ್ಟೇ.

To start with, it's "Yuva Dasara".

ಗಿಲಿ ಗಿಲಿ ಗಿಲಕ್ಕು, ಕಾಲ ಗೆಜ್ಜೆ ಝಣಕ್ಕು, ಹಾಡುಗಳ ಠಣಕ್ಕು,

ರಂಗೆದ್ದಿತೋ, ನಿನ್ನ ಕಂಡು ಹಾರಿ ಕುಣಿಯೋ ಗುಂಗೆದ್ದಿತೋ.

Rock On with Shankar Mahadevan....

Comments

Popular posts from this blog

ಹಾಡು, ಇದೇ ಹೊಸ ಹಾಡು

ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ