ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ


ಕಳೆದ ತಿಂಗಳು "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಚಿಂತನಾ ಕೂಟದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಇದು ಸಂವಾದ.ಕಾಂ ಹಾಗೂ ಕನ್ನಡಸಾಹಿತ್ಯ.ಕಾಂ ಜೊತೆಗೂಡಿ ಗಿರೀಶ್ ಕಾಸರವಳ್ಳಿ ಅವರ ಗೌರವಾರ್ಥ ಆಯೋಜಿಸಿದ ಸಿನೆಮಾ ರಸಗ್ರಹಣ ಶಿಬಿರ.


ಕಾರ್ಯಕ್ರಮದ ಕೇಂದ್ರಬಿಂದು - ಶ್ರೀ ಗಿರೀಶ್ ಕಾಸರವಳ್ಳಿ

ಈ ಪತ್ರ "ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ" ಕಾರ್ಯಕ್ರಮದ ಅನುಭವವಲ್ಲ. ಅದರಿಂದ ಪ್ರೇರಿತ.

A cinema can Impress, Influence, and/or Inspire (i3) us. ಯಾವ ಚಿತ್ರ i3 ಆಗಬಲ್ಲದು ಎಂಬುದು ಹೇಳುವುದು ಸಾಧ್ಯವಿಲ್ಲ. ಅದು commercial film ಅಥ್ವಾ ಅಪರೂಪಕ್ಕೆ ಕಲಾತ್ಮಕ ಚಿತ್ರ ಯಾವುದಾದರೂ ಆಗಬಹುದು. ಇಲ್ಲಿ "ಅಪರೂಪ" ಎಂದು ಬರೆದದ್ದಕ್ಕೆ ಕಾರಣವಿದೆ. ಕಲಾತ್ಮಕ ಸಿನಿಮಾ ಸಾಮಾನ್ಯರ ಆಯ್ಕೆ ಅಲ್ಲ. ಅದೇನಿದ್ರು serious film critique's choice. ಸಾಮಾನ್ಯವಾಗಿ ಇಂತಹ ಚಿತ್ರಗಳ ಹೂರಣ ಸಮಾಜದ ಹುಳುಕು ಮತ್ತು ಉತ್ತಮ ಜಗತ್ತಿನ ಕನಸು. ವ್ಯಂಗ್ಯ ಅಂದ್ರೆ ಯಾರ ನೋವು ನಲಿವನ್ನ ಈ ಚಿತ್ರಗಳಲ್ಲಿ ಸೆರೆ ಹಿಡಿಯಲಾಗಿರತ್ತೋ ಅವರೇ ಅದನ್ನ ನೋಡೋಲ್ಲ. ಇಲ್ಲಿ ಬದಲಾಗಬೇಕಿರುವುದು ಯಾವುದು? ಸಿನೆಮಾ ಮಾಡುವ ರೀತಿಯೋ ಅಥವಾ ನೋಡುಗರೋ?
ಚಲನಚಿತ್ರಗಳನ್ನ ಮನರಂಜನೆಗೆ ನೋಡುವವರ ಸಂಖ್ಯೆ ಹೆಚ್ಚು. ನೀವು ಯಾವಾಗಲಾದರು "ನಾನು frame by frame ಅರ್ಥ ಮಾಡ್ಕೊತೀನಿ" ಅಂತ ಥಿಯೇಟರಿಗೆ ಹೋಗ್ತೀರಾ? ಸಿನಿಮಾ ಚೆನ್ನಾಗಿದೆ ಅಥವಾ ಇಲ್ಲ? ಕಥಾವಸ್ತು? ಇಷ್ಟ್ ಬಿಟ್ರೆ ಸಿನಿಮಾ ನೋಡೋಕೆ ಮಹತ್ವದ ಕಾರಣ ಇರೋಲ್ಲ. ಕಲಾತ್ಮಕ ಚಿತ್ರಗಳು ಒಳ್ಳೆಯ ಚಿತ್ರಗಳೇ ಆಗಿದ್ದರೆ ನೋಡುವವರನ್ನ ಏಣಿಸಬಹುದೇಕೆ? ಪ್ರೇಕ್ಷಕನನ್ನ ಸೆಳೆದು ತನ್ನಲ್ಲಿ ಮುಳುಗಿಸಿಕೊಂಡು ತೇಲಿಸುವಂಥ ಶಕ್ತಿ ಅವುಗಳಲ್ಲಿಲ್ಲವೇ?

ವಾಸ್ತವ ತಿಳಿದಿರುವುದೇ. ಸೃಜನಶೀಲತೆಯ ಕೊರತೆ ನೋಡುಗ ಮತ್ತು ನಿರ್ದೇಶಕ ಇಬ್ಬರಲ್ಲಿಯೂ ಇದೆ. ಇಂತಿಷ್ಟೇ ಬದಲಾವಣೆ ಸೂಕ್ತ ಎಂಬುದು ತಪ್ಪು. ಬದಲಾಗಬೇಕಿರುವುದು ಬಹಳಷ್ಟಿದೆ. ಶತಮಾನಗಳಿಂದಲೂ ಪರಿಪೂರ್ಣ ಜಗತ್ತಿನ ಹಂಬಲದಲ್ಲಿ ಜಗತ್ತು ಬದಲಾಗುತ್ತಲೇ ಇದೆ. ಶತಮಾನಗಳು ಕಳೆದವು ಇನ್ನು ಅದೇ ಹಂಬಲ ಇದೆ. ಇಲ್ಲಿ ಸ್ಥಿರ ಒಂದೇ. ಅದು "ಬದಲಾವಣೆ". ಸಿನಿಮಾ ಬಂದಾಗಿನಿಂದ ಅದೆಲ್ಲವನ್ನ ಚಿತ್ರಿಸುತ್ತಲೇ ಇದೆ. ತಾನೂ ಬದಲಾಗುತ್ತಿದೆ. ಆದರೆ ದಿಕ್ಕು ದೆಶೆ ಇಲ್ಲದೆ. ಕಲಾತ್ಮಕ ಚಿತ್ರಗಳಲ್ಲೂ ಹೊಸ ನೀರು ಹರಿಯಬೇಕಿದೆ ಮತ್ತು ನೋಡುಗರ ದೃಷ್ಟಿ ಬದಲಾಗಬೇಕಿದೆ.

Comments

Popular posts from this blog

ಹಾಡು, ಇದೇ ಹೊಸ ಹಾಡು

Me and My Stars

The Groundnut