Drama - Film Music Review
ಟಿಪ್ಪು ಹಾಡು , ಅದರಲ್ಲೂ ಭಟ್ಟರ ಲಿರಿಕ್ಸ್, ಜೊತೆಗೆ ಹರಿಕೃಷ್ಣ ಸಂಗೀತದಲ್ಲಿ. ನಾನು ಕೇಳಿದ ಮಟ್ಟಿಗೆ ಈ ಮೂವರ ಜನಪ್ರಿಯ ಚಿತ್ರ ಸಂಗೀತ 'ಜಾಕಿ'. ಹಾಗೆ ಏನೋ ವಿಶೇಷ ಇರಬಹುದೇನೋ ಅನ್ನೋ ನಿರೀಕ್ಷೆಯಲ್ಲೇ 'ಡ್ರಾಮ' ಚಿತ್ರದ ಹಾಡುಗಳನ್ನ ಆಲಿಸಿದೆ. ಭಟ್ಟರ ಕವಿತೆಗಳದು ಅದೇ ಧಾಟಿ. ಬಹುಶಃ ಕೇಳಿ ಕೇಳಿ ಜನರಿಗೆ ಬೇಜಾರು ಬಂದು ಹಾಡುಗಳು ಸಿಕ್ಕಾಪಟ್ಟೆ ಫ್ಲಾಪ್ ಆಗೊವರ್ಗೆ ಹಾಗೆ ಮುಂದುವರಿಯತ್ತೆ. ಹಿಟ್ ಫಾರ್ಮುಲ ಹಾಗೆ ಬಿಡುವುದಕ್ಕು ಆಗಲ್ಲ ಅಲ್ವೇ? ಆದರು 'ಶಿವ ಅಂತ ಹೋಗುತಿದ್ದೆ' ಹಾಡಲ್ಲಿ ಏನೋ ಹೊಸ ಕಿಕ್ ಅಂತೂ ಇತ್ತು ;). ನಾನಂತೂ ಟಿಪ್ಪು ಹಾಡಿದ ಧಾಟಿಗೆ ಮರುಳಾಗಿ ಬಿಟ್ಟಿದ್ದೆ. 'ಡ್ರಾಮ' ಅಲ್ಲಿ ಟಿಪ್ಪು ಕಂಠಕ್ಕೆ ನಿಜ ಮೋಸ ಮಾಡಿವೆ ಹಾಡುಗಳು.
ಆದರು ಸೋನು ನಿಗಮ್ ಕಂಠದಿಂದ ಏನೇ ಬಂದ್ರು ಕರ್ಣಾಮೃತ ಅನ್ನೋಥರ 'ಚೆಂದುಟಿಯ ಪಕ್ಕದಲ್ಲಿ' ಹಾಡು ಕೇಳ್ದಾಗ ಅನ್ಸತ್ತೆ. ಶ್ರೇಯ ಘೋಶಾಲ್ ಯಾಕೆ ಮಿಸ್ಸಿಂಗ್ ಅಂತ ಖಂಡಿತ ಅನ್ಸತ್ತೆ. ಆದ್ರೆ ಸುನೀತಾ ಗೋಪುರಾಜ್ ಹಾಡಲ್ಲಿ ವಿಶೇಷ ಮಾಧುರ್ಯ ಖಂಡಿತ ಇದೆ. ಹುಡುಗರು ಚಿತ್ರದ 'ನೀರಲ್ಲಿ ಸಣ್ಣ ಅಲೆಯೊಂದು' ಗೀತೆಯಲ್ಲೇ ಅಂದುಕೊಂಡಿದ್ದೆ ಇದು ಮತ್ತೆ ಮತ್ತೆ ಕೇಳಲೇ ಬೇಕಾದ ವಾಯ್ಸ್ ಅಂತ. ಆದ್ರೆ ಕಾಯ್ಕಿಣಿ ವಿರಚಿತ 'ಹಂಬಲದ ಹೂವನ್ನು' ಹಾಡಲ್ಲಿ ಯಾವ ಭಾವ ಸಂಯೋಜಿಸಿಸಾಲಾಗಿದೆ ಅನ್ನೋದೇ ಗೊತ್ತಾಗ್ಲಿಲ್ಲ. ಚಿತ್ರ ನೋಡಿದ್ರೆ ಗೊತ್ತಾಗಬಹುದು. ಎಂದಿನ ಹಾಗೆ ಜಯಂತ್ ಕಾಯ್ಕಿಣಿ ಅವರ ಉಪಮೆಗೆ ನಿಲುಕದ ಉಪಮೆಗಳನ್ನ ಕಿವಿಗೊಟ್ಟು ಕೇಳಿ ಡ್ರಾಮ ಚಿತ್ರದ ಸಂಗೀತ ವಿಶ್ಲೇಷಣೆ ಮಾಡಿ ಮುಗಿಸಿ ಆಯ್ತು :).
"ಚೆಂದುಟಿಯ ಪಕ್ಕದಲ್ಲಿ" ಮತ್ತೆ "ಹಂಬಲದ ಹೂವನ್ನು" ಕೇಳಬಹುದು. ಉಳಿದಂತೆ ಅಂತ ಹೇಳಿಕೊಳ್ಳೊಂತದ್ದು ಏನು ಇಲ್ಲ.
nange 'Drama' movie kooda ishTa aaytu...:)
ReplyDelete