ಮನಸೇ....

ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ , ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ .... I don't remember how many times I might have listened to this song from Amrutavarshini. ಈಗಲೂ ಕೇಳ್ತೇನೆ ಬೇಸರವಿಲ್ಲದೇ . ಸದ್ದಿಲ್ಲದೊಂದು ರಾತ್ರಿಯಲ್ಲಿ ನಿದಿರೆ ರಜಾ ಹಾಕಿ ಕುತಾಗ, ಈ ಹಾಡಲ್ಲೇನೋ  ಆತ್ಮಿಯ ಸ್ಪಂದನ. ರಾತ್ರಿ ಒಂದೂವರೆಯಲ್ಲಿ ಮೋಡ ಮುಸುಕಿ ಸಣ್ಣ ಹನಿ ಇಡುವಾಗ ಕತ್ತಲ ಹಂದರದ ಅಡಿಯಲ್ಲಿ ಆಲೋಚನೆಗಳ ತೇಲಿಸುವ ಹಾಡಿನ ಮೇಳವಣೆ. ಆಗೆಲ್ಲ ಕೇಳುವ ಸದ್ದಿನಲ್ಲೇನೋ ಹೊಸ ಸ್ಪರ್ಶ. ನವಿಲುಗರಿಯು ನೇವರಿಸಿದಂತೆ. ಅದಕಾಗೆ ಈ ಹಾಡನ್ನ ಮತ್ತೆ ಮತ್ತೆ ಆಲಿಸುವ ಹಂಬಲ.
ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ?....... ಈ ಭಾವ ಕುಸುರಿ ಮನಸಿನದು. ನಾವೇನಿದ್ದರೂ ಅದರಂತೆ ತಾಳ ಹಾಕುವುದು.ಮನಸ್ಸಿಗೆ ಹಿಡಿಸದ ರಾಗವೆಷ್ಟು ಕಷ್ಟವೋ ಹಿಡಿಸಿದ್ದು ಅಷ್ಟೇ ಸುಲಭ . ಗುರಿಯಿಲ್ಲದೆ ಓಡುವ ಕುದುರೆ  ಕಟ್ಟಿದಂತೆ ಮನಸಿನ ಭಾವಗಳ ಕಟ್ಟುವುದು ಅಂದರೆ.ಆದರೆ ಅದು ಹಾಗೆ ಓಡುವಾಗಲು ಚಂದ ಅಲ್ಲವೇ ? ಯಾವಾಗಲೂ  ಚಿಂತನೆಗೊಂದು ಗುರಿ ಯಾಕೆ ಬೇಕು?ಯಾವಾಗಲೊಮ್ಮೆ ಸರಿ ರಾತ್ರಿ ತನ್ನೊಂದಿಗೆ  ಅದು ತಾನೇ ಇರಬೇಕು. ತನಗೆ  ಬೇಕಾದನ್ನ ಅರಸಿ ಹೋಗುವ ಹೊತ್ತು .ಆ ಹೊತ್ತಿಗಾಗೆ ಆಗಾಗೆ  ಕತ್ತಲ ಕೊನೆಯಲ್ಲಿ  ದಿಗಂತದತ್ತ  ನೋಟ  ನೆಟ್ಟು ಕಛೇರಿ  ಒಂದು ಇಟ್ಕೊಬೇಕು. ಮನಸಿನದು ಶ್ರುತಿ ಇಲ್ಲದ ಹಾಡಾದರೂ ಸರಿ ಆಲಿಸಬೇಕು. ಯಾರಿಗೆ ಗೊತ್ತು ಯಾವ ಹೊಸ ರಾಗ ಹೊಮ್ಮುವುದು. ಯಾವ ಹಾಡು ಹುಟ್ಟುವುದು :).


Comments

  1. ಅಪ್ಪಟ ಸತ್ಯ ..ನನಗೂ ಈ ಹಾಡು ತುಂಬಾ ಇಷ್ಟ. .

    ReplyDelete
  2. Thumba artapurnavaagide nim post.. So true..:) Aa haadu nijvaglu super.. Nim holike maaduva shyli enna chenna.Tq for such a meaningful post. Edu nimma mattu nim post goskara:-

    Manase,
    Baduku ninagaagi,bavane ninagaagi,
    Nanna preetiye sulladare, jagavella sullu allave..

    Manase..... manase......

    Ninna ondu maatu saaku, maru maatu yelli
    Ninna ondu aanathi saaku, naa aadigalalli
    Ninna ondu hesare saaku,usiratakilli
    Ninna ondu sparsha saaku, ee janumadalli

    Manase naa yene maadidaru ninna preetigallave..
    Manase manasa kshamise

    Manase..... manase......

    Nanna preeti gange neenu,mudi seralende..
    Samayagala sarapaliyali, kai gombeyaade..
    Nanna baala putake neenu, hosa tiruvu tande..
    Ninna maretu hodare ega, badukeke munde..

    Manase naa yene maadidaru ninna preetigallave..
    Manasae manasa harise...

    Manase ee badugu ninagaagi,bavane ninagaagi,
    Nanna preetiye sulladare, jagavella sullu allave..:)

    ReplyDelete
  3. @Sudhir: nija, beautiful song adu. e postge was waiting to see comment :)

    ReplyDelete
  4. @Anony: Thanks a lot, comment.ge haagu haadina lyrics.ge kuda.

    ReplyDelete
  5. ಆ ಹಾಡನ್ನ ಅಷ್ಟೋಂದ್ ಬಾರಿ ಕೇಳಿದಿರಾ ಅಂದ್ಮೆಲೆ,i am sure ಹಾಡೊಕೆ practice ಮಾಡಿರ್ತಿರಾ:) ಯಾವಾಗ ಕಳಿಸ್ತಿರಾ audio clip-ನ:)?
    btn, ಈ ಬರಹದಲ್ಲಿನ ನಿಮ್ ಸಾಲುಗಳು ಆಪ್ತವಾಗಿವೆ.

    ReplyDelete
  6. @Pramod:
    Nice try :).adre haadu kaliyo gOjige hogilla. May be could try on the Keyboard.

    ReplyDelete
  7. "samayagaLa sarapaLiyaali, kai gombeyaade.."
    Can u please ex[lain wt this means in english? i love this songs bt my kannada is not good. i am a non kannadiga, can anyone herlp?

    ReplyDelete
  8. @Anony: It means...

    "I've become a puppet in the hands of time".

    The crux of the song is that, when your heart yearns for something you become helpless. You've to listen to what it says. It won't let you take breathe until it gets what it loves.

    ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ