ಪ್ರಶ್ನಾತೀತ ಮೌನ

ಮೌನ ...ಮಾನಸ ಸರೋವರದ

ಪ್ರಶಾಂತ ಸ್ಥಿತಿಯೋ,

ಚಂಡಮಾರುತದ ಮುನ್ಸೂಚನೆಯೋ?

ಅಧರಗಳ ಗಂಟು ರಚಿಸುವುದು

ಭೇದಿಸಲಾಗದ ಚಕ್ರವ್ಯೂಹವೋ,

ಇದರ ಆದಿ ಎಲ್ಲಿ, ಅಂತ್ಯವೆಲ್ಲಿ?

ಮಾತು ಸೋತಾಗ ಮೌನ

ಭಾವನೆಗಳ ದ್ವಂದ್ವ,

ಹುಡುಕಾಟ ಯಾವ ಚೇತನದ್ದೋ?

ಮೌನದ ರಾಜಬೀದಿಯಲಿ,

ಮನ ತೇರೆಳೆಯುವುದು ಹೊಂಗನಿಸಿನದ್ದೋ

ಒಡೆದ ಕನಸಿನದ್ದೋ?

ಮೌನ...ಮಧುರವೋ ಕಟುವೋ

ಅನಿವಾರ್ಯವೋ ಆಡಂಬರವೋ

ಉತ್ತರಮುಖಿಯೋ ಪ್ರಶ್ನಾತೀತವೋ...ಎನೀ..?

Comments

  1. Nijavagisu sogasaada blog nimmadu
    from mallinine@yahoo.com

    ReplyDelete

Post a Comment

Popular posts from this blog

ಹಾಡು, ಇದೇ ಹೊಸ ಹಾಡು

ಜ್ಞಾಪಕ ಚಿತ್ರಶಾಲೆ

ee bhaavageete....