Posts

Showing posts from September, 2008

ನಾಡ ಹಬ್ಬ ನೋಡು ಬಾ

Image
ನನ್ನ ಬ್ಲಾಗ್ ಗೆ ಯಾವಾಗ್ಲೂ ಬರೋರಿಗೆ , ಅಪರೂಪಕ್ಕೆ ಬಂದವರಿಗೆ ಹಾಗೂ ದಾರಿ ತಪ್ಪಿ ಬಂದವರಿಗೆ ( ಬಾರದಿರುವವರನ್ನು ಸೇರಿಸಿ) ದಸರಾ ಹಬ್ಬಕ್ಕೆ ಆತ್ಮೀಯ ಸ್ವಾಗತ. ಅರಮನೆ ಮುಂಭಾಗದಲ್ಲಿಯ ಸ್ವಾಗತ ಚಿತ್ರ ದಿನದ ಕೆಲಸ ಮುಗಿಸಿ ಅರಮನೆ ಕಡೆ ಹೊರಟಾಗ ಸಂಜೆ ೭. ಮನಸ್ಸಿನ್ನಲ್ಲೊಂದು ಪುಳಕ. ದೀಪದ ಅಲಂಕಾರದಿಂದ ಕಂಗೊಳಿಸೋ ರಸ್ತೆಗಳು, ಅರಮನೆ ಎಲ್ಲವೂ ಒಂದು ರೋಮಾಂಚನ. ಅರಮನೆ ಮುಟ್ಟಿದಾಗ ಪ್ರಿಯಾ ಸಹೋದರಿಯರ ಗಾಯನ ಪ್ರಾರಂಭವಾಗಿತ್ತು. ಒಂದೆರಡು ಕಿರ್ತನೆಗಳನ್ನ ಕಿವಿಯಲ್ಲಿ ತುಂಬಿಕೊಂಡು ವಿಜಯ ದಶಮಿ ಮೆರವಣಿಗೆಗೆ ಅರಮನೆಗೆ ಆಗಮಿಸಿರುವ ಆನೆಗಳನ್ನ ನೋಡಿ ಕೊಂಡು ( I took a snap of all of them. But it din't come out well. You know why! :)) ಅಲ್ಲಿಂದ ಹೊರಟಾಗ ೮:೩೦. ಮನೆಗೆ ಹಿಂತಿರುಗುವ ದಾರಿಯಲ್ಲಿ ಸಿಗುವ ಕಲಾಮಂದಿರ ಕೈ ಬಿಸಿ ಕರೆಯಿತು. ಅರಮನೆ ಆವರಣದಲ್ಲಿ ಪ್ರಿಯಾ ಸಹೋದರಿಯರಿಂದ ಕಛೇರಿ ರಂಗಾಯಣಕ್ಕೆ ದಾರಿ ತೋರುವ ಮಣ್ಣಿನ ಬೊಂಬೆ ಏನ್ ನಡೀತಿದೆ ಅನ್ನೋ ಕುತೂಹಲ ತಡೆಯಲಾರದೆ ಕಲಾಮಂದಿರ ಹಿಂದೆ ಇರುವ ರಂಗಾಯಣಕ್ಕೆ ಹೋದರೆ ಯಾವುದೋ ನಾಟಕ ನಡೆಯುತ್ತಿತ್ತು. ನಾಟಕ ಪ್ರಾರಂಭವಾಗಿ ಬಹಳ ಹೊತ್ತಾಗಿತ್ತು. ಅದರ ತೆರೆ ಇಳಿಯುವುದನ್ನ ನೋಡುವ ಅವಕಾಶ ನಮ...

ಜ್ಞಾಪಕ ಚಿತ್ರಶಾಲೆ

Image
ಮೈಸೂರಿನ ಕಲಾಮಂದಿರದಲ್ಲಿ ನಡೆದ 'ಈ' ಟಿವಿ ಆಯೋಜಿಸಿದ್ದ " ಕವಿನಮನ" ಕಾರ್ಯಕ್ರಮದ ಅನುಭವವನ್ನ ಈ ಪತ್ರದಲ್ಲಿ ಬರೆಯುತ್ತಿದ್ದೇನೆ. ಮೆರವಣಿಗೆಯಲ್ಲಿ ಆಗಮಿಸಿದ ಕವಿಗಳು ------------------------------------------------------------------------------------------------- "ಮತ್ತದೇ ಸಂಜೆ ಅದೇ ಬೇಸರ" ಎನ್ನುವಂತಿರಲಿಲ್ಲ ಈ ಭಾನುವಾರ ಸಂಜೆ. ಕನ್ನಡ ಕಾವ್ಯದ ರಸಧಾರೆ ಹರಿದಿತ್ತು ಕಲಾಮಂದಿರದಲ್ಲಿ. ಸಾಹಿತ್ಯಲೋಕದ 'ಅಂದು - ಇಂದು' ಗಳ ಮೇಳವಣೆ. ತಮ್ಮ ಹಾಗೂ ಕವಿಗಳ ನಂಟಿನ ಗಂಟನ್ನ ಬಿಚ್ಚಿ 'ಜ್ಞಾಪಕ ಚಿತ್ರಶಾಲೆ' ( ಡಿ. ವಿ. ಜಿ ಅವರ ಕೃತಿಯೊಂದರ ಹೆಸರು) ಸೃಷ್ಟಿಸಿದವರು ರವಿಬೆಳೆಗೆರೆ. ಭಾವಗೀತೆಗಳಿಗೆ ಜೀವ ತುಂಬಿದವರು ಎಸ್. ಪಿ. ಬಿ, ಸಂಗೀತ ಕುಲಕರ್ಣಿ ಮತ್ತು ಇತರರು. ಬರಿಯ ಗೀತೆಗಳಲ್ಲ ಅವು. ಮುಂಜಾವಿನ ತುಂತುರು ಸೋನೆ ಮಳೆ, ಕೃಷ್ಣನ ಕೊಳಲ ದನಿ, ಎದೆತುಂಬಿ ಬಂದ ಹಾಡು, ಅಥವಾ ಶಿವನ ಮುಡಿಯಿಂದ ಇಳಿದ ಗಂಗೆ...... ಒಟ್ಟಿನಲ್ಲಿ ಅವೆಲ್ಲ ಉಪಮೆ ನಿಲುಕದ ಬರವಣಿಗೆ. ಅದರರ್ಥ, ಆಂತರ್ಯ ಬರೆಯಲು ನಾನು ಅಲ್ಪ. ಕೆ. ಎಸ್. ನಿಸಾರ್ ಅಹಮದ್ ------------------------------------------------------------------------------------------------- 'ಮೈಸೂರು ಮಲ್ಲಿಗೆ'ಯಲ್ಲಿ ಪ್ರೀತಿ, 'ಮಂಕುತಿಮ್ಮನ ಕಗ್ಗ'ದಲ್ಲಿ ಜೀವನಸಾರ, ' ನಿ...