ಗುಬ್ಬಚ್ಚಿ ಡೇ
ಬೆಳ್ಳಿಗ್ಗೆ ದಿನಪತ್ರಿಕೆಯಲ್ಲಿ ನೋಡಿದಾಗಲೇ ಗೊತ್ತಾದದ್ದು ಮಾರ್ಚ್ ೨೦ ಗುಬ್ಬಚ್ಚಿ ಡೇ ಅಂತ. ಇದು ಈ ವರ್ಷದಿಂದ ಪ್ರಾರಂಭ. ಅದು ಒಂದು ಕಾಲ ಇತ್ತು. ನಮಗೆ ಗುಬ್ಬಚ್ಚಿ ಅಂದ್ರೆ ಸ್ಪೆಷಲ್ ಅನಿಸದ ಕಾಲ. ಮನೆಯ ಹಿಂದೆ ಇದ್ದ ಬಯಲಲ್ಲಿ ಹಾಕಿದ್ದ ಭತ್ತದ ಬಣವೆಗಳಲ್ಲಿ ದಂಡು ದಂಡಾಗಿ ಮೆಲ್ಲುತ್ತಾ ಕೂತ ಗುಬ್ಬಚ್ಚಿಗಳನ್ನ ಸಣ್ಣ ಕಲ್ಲು ತೂರಿ ಎಬ್ಬಿಸುತ್ತಿದ್ದದ್ದು. ಅವೆಲ್ಲ ಒಟ್ಟಾಗಿ ಹಾರದನ್ನೋ ನೋಡೋದೇ ಕಣ್ಣಿಗೆ ಹಬ್ಬ, ಅದೇ ದೇವರು ಹಾಕಿದ ಸಹಿ. ಈಗೆಲ್ರಿ ಕಾಣತ್ವೆ ಹಾಗೆ?? ಅದಕ್ಕೆ ಗುಬ್ಬಚ್ಚಿ ಸ್ಪೆಷಲ್ ಮತ್ತು ಇಂದು ಗುಬ್ಬಚ್ಚಿ ದಿನ. ಮಾಡಬೇಕದದ್ದೇ. ಇಲ್ಲಾಂದ್ರೆ ಈಗಿನ ಮಕ್ಕಳಿಗೆ ಗುಬ್ಬಚ್ಚಿ ಅನ್ನೋ ಹಕ್ಕಿ ಇತ್ತಂತಾನು ಗೊತ್ತಾಗೋದಿಲ್ಲ. ನಿಮ್ಮಲ್ಲಿ ಯಾರಿಗಾದರು ಗುಬ್ಬಚ್ಚಿ ಪರಿಚಯವಿಲ್ಲ ಅಂದ್ರೆ , ಇಗೋ ಫೋಟೋ. ಕೃಪೆ : http://sdakotabirds.com/species/chipping_sparrow_info.htm