ವರ್ಣಾವರಣ
ಪ್ರಮೋದ್ ಅವರ ಕುಂಚ-ಪ್ರಪಂಚ ಪ್ರೇರಿತ .... ವರ್ಣಾವರಣ ವರ್ಣಗಳು ವಿಲೀನವಾದರೆ ಸಾಕು ಬಿಳಿ ಹಾಳೆಯ ಮೇಲೆ ಅದು ಸುಪ್ತ ಮನಸಿನ ಅವ್ಯಕ್ತ ಭಾವಕ್ಕೆ ದರ್ಪಣದಂತೆ ಕೋಲ್ ಮಿಂಚು ಕಾಮನಬಿಲ್ಲು ಸುಳಿವಿಲ್ಲದ ಸೆಲೆ ಮೂಡುವುದು ಮರೆಯಾಗುವುದು; ಮರುಭೂಮಿಯ ಮರಳಂತೆ ಬೆರೆಯುವುದು ಬದಲಾಗುವುದು ರೂಪುರೇಷೆ ಬಾಗುವುದು ಬಳುಕುವುದು ಕುಂಚ ಕಲ್ಪನೆಗಳ ಹೊತ್ತು ಮತ್ತೊಮ್ಮೆ ಭಾವನೆಗೆ ಜೀವಕಳೆಯ ಸ್ಪರ್ಶ ವರ್ಣನೆಗೆ ನಿಲುಕದ ಅನುಭಾವದ ಅನಾವರಣ