ಪ್ರಶ್ನಾತೀತ ಮೌನ
ಮೌನ ...ಮಾನಸ ಸರೋವರದ ಪ್ರಶಾಂತ ಸ್ಥಿತಿಯೋ, ಚಂಡಮಾರುತದ ಮುನ್ಸೂಚನೆಯೋ? ಅಧರಗಳ ಗಂಟು ರಚಿಸುವುದು ಭೇದಿಸಲಾಗದ ಚಕ್ರವ್ಯೂಹವೋ, ಇದರ ಆದಿ ಎಲ್ಲಿ, ಅಂತ್ಯವೆಲ್ಲಿ? ಮಾತು ಸೋತಾಗ ಮೌನ ಭಾವನೆಗಳ ದ್ವಂದ್ವ, ಹುಡುಕಾಟ ಯಾವ ಚೇತನದ್ದೋ? ಮೌನದ ರಾಜಬೀದಿಯಲಿ, ಮನ ತೇರೆಳೆಯುವುದು ಹೊಂಗನಿಸಿನದ್ದೋ ಒಡೆದ ಕನಸಿನದ್ದೋ? ಮೌನ...ಮಧುರವೋ ಕಟುವೋ ಅನಿವಾರ್ಯವೋ ಆಡಂಬರವೋ ಉತ್ತರಮುಖಿಯೋ ಪ್ರಶ್ನಾತೀತವೋ...ಎನೀ..?