Posts

Showing posts from November, 2010

ಮನಸೇ....

ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ , ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ .... I don't remember how many times I might have listened to this song from Amrutavarshini. ಈಗಲೂ ಕೇಳ್ತೇನೆ ಬೇಸರವಿಲ್ಲದೇ . ಸದ್ದಿಲ್ಲದೊಂದು ರಾತ್ರಿಯಲ್ಲಿ ನಿದಿರೆ ರಜಾ ಹಾಕಿ ಕುತಾಗ, ಈ ಹಾಡಲ್ಲೇನೋ  ಆತ್ಮಿಯ ಸ್ಪಂದನ. ರಾತ್ರಿ ಒಂದೂವರೆಯಲ್ಲಿ ಮೋಡ ಮುಸುಕಿ ಸಣ್ಣ ಹನಿ ಇಡುವಾಗ ಕತ್ತಲ ಹಂದರದ ಅಡಿಯಲ್ಲಿ ಆಲೋಚನೆಗಳ ತೇಲಿಸುವ ಹಾಡಿನ ಮೇಳವಣೆ. ಆಗೆಲ್ಲ ಕೇಳುವ ಸದ್ದಿನಲ್ಲೇನೋ ಹೊಸ ಸ್ಪರ್ಶ. ನವಿಲುಗರಿಯು ನೇವರಿಸಿದಂತೆ. ಅದಕಾಗೆ ಈ ಹಾಡನ್ನ ಮತ್ತೆ ಮತ್ತೆ ಆಲಿಸುವ ಹಂಬಲ. ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ?....... ಈ ಭಾವ ಕುಸುರಿ ಮನಸಿನದು. ನಾವೇನಿದ್ದರೂ ಅದರಂತೆ ತಾಳ ಹಾಕುವುದು.ಮನಸ್ಸಿಗೆ ಹಿಡಿಸದ ರಾಗವೆಷ್ಟು ಕಷ್ಟವೋ ಹಿಡಿಸಿದ್ದು ಅಷ್ಟೇ ಸುಲಭ . ಗುರಿಯಿಲ್ಲದೆ ಓಡುವ ಕುದುರೆ  ಕಟ್ಟಿದಂತೆ ಮನಸಿನ ಭಾವಗಳ ಕಟ್ಟುವುದು ಅಂದರೆ.ಆದರೆ ಅದು ಹಾಗೆ ಓಡುವಾಗಲು ಚಂದ ಅಲ್ಲವೇ ? ಯಾವಾಗಲೂ  ಚಿಂತನೆಗೊಂದು ಗುರಿ ಯಾಕೆ ಬೇಕು?ಯಾವಾಗಲೊಮ್ಮೆ ಸರಿ ರಾತ್ರಿ ತನ್ನೊಂದಿಗೆ  ಅದು ತಾನೇ ಇರಬೇಕು. ತನಗೆ  ಬೇಕಾದನ್ನ ಅರಸಿ ಹೋಗುವ...