Popular posts from this blog
ಗುಬ್ಬಚ್ಚಿ ಡೇ
ಬೆಳ್ಳಿಗ್ಗೆ ದಿನಪತ್ರಿಕೆಯಲ್ಲಿ ನೋಡಿದಾಗಲೇ ಗೊತ್ತಾದದ್ದು ಮಾರ್ಚ್ ೨೦ ಗುಬ್ಬಚ್ಚಿ ಡೇ ಅಂತ. ಇದು ಈ ವರ್ಷದಿಂದ ಪ್ರಾರಂಭ. ಅದು ಒಂದು ಕಾಲ ಇತ್ತು. ನಮಗೆ ಗುಬ್ಬಚ್ಚಿ ಅಂದ್ರೆ ಸ್ಪೆಷಲ್ ಅನಿಸದ ಕಾಲ. ಮನೆಯ ಹಿಂದೆ ಇದ್ದ ಬಯಲಲ್ಲಿ ಹಾಕಿದ್ದ ಭತ್ತದ ಬಣವೆಗಳಲ್ಲಿ ದಂಡು ದಂಡಾಗಿ ಮೆಲ್ಲುತ್ತಾ ಕೂತ ಗುಬ್ಬಚ್ಚಿಗಳನ್ನ ಸಣ್ಣ ಕಲ್ಲು ತೂರಿ ಎಬ್ಬಿಸುತ್ತಿದ್ದದ್ದು. ಅವೆಲ್ಲ ಒಟ್ಟಾಗಿ ಹಾರದನ್ನೋ ನೋಡೋದೇ ಕಣ್ಣಿಗೆ ಹಬ್ಬ, ಅದೇ ದೇವರು ಹಾಕಿದ ಸಹಿ. ಈಗೆಲ್ರಿ ಕಾಣತ್ವೆ ಹಾಗೆ?? ಅದಕ್ಕೆ ಗುಬ್ಬಚ್ಚಿ ಸ್ಪೆಷಲ್ ಮತ್ತು ಇಂದು ಗುಬ್ಬಚ್ಚಿ ದಿನ. ಮಾಡಬೇಕದದ್ದೇ. ಇಲ್ಲಾಂದ್ರೆ ಈಗಿನ ಮಕ್ಕಳಿಗೆ ಗುಬ್ಬಚ್ಚಿ ಅನ್ನೋ ಹಕ್ಕಿ ಇತ್ತಂತಾನು ಗೊತ್ತಾಗೋದಿಲ್ಲ. ನಿಮ್ಮಲ್ಲಿ ಯಾರಿಗಾದರು ಗುಬ್ಬಚ್ಚಿ ಪರಿಚಯವಿಲ್ಲ ಅಂದ್ರೆ , ಇಗೋ ಫೋಟೋ. ಕೃಪೆ : http://sdakotabirds.com/species/chipping_sparrow_info.htm
ಮನಸೇ....
ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ , ನನ್ನ ಪ್ರೀತಿಯೇ ಸುಳ್ಳಾದರೆ ಜಗವೆಲ್ಲ ಸುಳ್ಳು ಅಲ್ಲವೇ .... I don't remember how many times I might have listened to this song from Amrutavarshini. ಈಗಲೂ ಕೇಳ್ತೇನೆ ಬೇಸರವಿಲ್ಲದೇ . ಸದ್ದಿಲ್ಲದೊಂದು ರಾತ್ರಿಯಲ್ಲಿ ನಿದಿರೆ ರಜಾ ಹಾಕಿ ಕುತಾಗ, ಈ ಹಾಡಲ್ಲೇನೋ ಆತ್ಮಿಯ ಸ್ಪಂದನ. ರಾತ್ರಿ ಒಂದೂವರೆಯಲ್ಲಿ ಮೋಡ ಮುಸುಕಿ ಸಣ್ಣ ಹನಿ ಇಡುವಾಗ ಕತ್ತಲ ಹಂದರದ ಅಡಿಯಲ್ಲಿ ಆಲೋಚನೆಗಳ ತೇಲಿಸುವ ಹಾಡಿನ ಮೇಳವಣೆ. ಆಗೆಲ್ಲ ಕೇಳುವ ಸದ್ದಿನಲ್ಲೇನೋ ಹೊಸ ಸ್ಪರ್ಶ. ನವಿಲುಗರಿಯು ನೇವರಿಸಿದಂತೆ. ಅದಕಾಗೆ ಈ ಹಾಡನ್ನ ಮತ್ತೆ ಮತ್ತೆ ಆಲಿಸುವ ಹಂಬಲ. ಮನಸೇ ನಾ ಏನೇ ಮಾಡಿದರು ನಿನ್ನ ಪ್ರೀತಿಗಲ್ಲವೇ?....... ಈ ಭಾವ ಕುಸುರಿ ಮನಸಿನದು. ನಾವೇನಿದ್ದರೂ ಅದರಂತೆ ತಾಳ ಹಾಕುವುದು.ಮನಸ್ಸಿಗೆ ಹಿಡಿಸದ ರಾಗವೆಷ್ಟು ಕಷ್ಟವೋ ಹಿಡಿಸಿದ್ದು ಅಷ್ಟೇ ಸುಲಭ . ಗುರಿಯಿಲ್ಲದೆ ಓಡುವ ಕುದುರೆ ಕಟ್ಟಿದಂತೆ ಮನಸಿನ ಭಾವಗಳ ಕಟ್ಟುವುದು ಅಂದರೆ.ಆದರೆ ಅದು ಹಾಗೆ ಓಡುವಾಗಲು ಚಂದ ಅಲ್ಲವೇ ? ಯಾವಾಗಲೂ ಚಿಂತನೆಗೊಂದು ಗುರಿ ಯಾಕೆ ಬೇಕು?ಯಾವಾಗಲೊಮ್ಮೆ ಸರಿ ರಾತ್ರಿ ತನ್ನೊಂದಿಗೆ ಅದು ತಾನೇ ಇರಬೇಕು. ತನಗೆ ಬೇಕಾದನ್ನ ಅರಸಿ ಹೋಗುವ...
Awwwww....so cute...
ReplyDeleteCan't wait to get into fatherhood - Ru